Current Date 01 Aug, 2026

ಅಂದು ಬಾಲನಟಿಯರಾಗಿದ್ದವರು ಬಳಿಕ ನಾಯಕಿಯರು ಆಗಿ ಮಿಂಚಿದರು!

ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ನೂರಾರು ಜನ ಬರ್ತಿದ್ದಾರೆ. ಬಂದವರೆಲ್ಲಾ ಗೆಲ್ಲಲ್ಲ. ಅದೇ ರೀತಿ ಪ್ರಯತ್ನ ಕೂಡ ನಿಲ್ಲಲ್ಲ. ನಟನೆಯ ವಿಚಾರಕ್ಕೆ ಬಂದರೆ ಯಾರಿಗೆ ಯಾವಾಗ ಅದೃಷ್ಟ ಖುಲಾಯಿಸುತ್ತದೆ ಎಂದು ಹೇಳುವುದು ಕಷ್ಟ.

ಕೆಲವರು ಬಾಲ್ಯದಲ್ಲೇ ತಮ್ಮ ಪ್ರತಿಭೆ ಮೂಲಕ ಮೋಡಿ ಮಾಡಿ ಬೆಳ್ಳಿ ಪರದೆಗೆ ಬರುತ್ತಾರೆ. ನಟ ವಿಚಾರಕ್ಕೆ ಪುನೀತ್ ರಾಜ್‌ಕುಮಾರ್, ಮಾಸ್ಟರ್ ಮಂಜುನಾಥ್, ಮಾಸ್ಟರ್ ಆನಂದ್, ಅರ್ಜುನ್ ಸರ್ಜಾ, ವಿಜಯ ರಾಘವೇಂದ್ರ ಹೀಗೆ ದೊಡ್ಡ ಲಿಸ್ಟ್ ಸಿಗುತ್ತಿದೆ. ಇದರಲ್ಲಿ ಕೆಲವರು ಮುಂದೆ ನಾಯಕ ನಟರಾಗಿಯೂ ಚಿತ್ರರಂಗದಲ್ಲಿ ರೀ ಎಂಟ್ರಿ ಕೊಟ್ಟು ಗೆದ್ದಿದ್ದಾರೆ.